ಯಲ್ಲಾಪುರ ಭಾಗದ ಸಿದ್ದಿ ಸಮುದಾಯದ ಮುಖಂಡರಾದ ಬಾಬು ಸಿದ್ದಿ, ದೇಶಪಾಂಡೆ ಅವರ ಆಪ್ತರಾಗಿದ್ದು, ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸಭೆಗಳು ಆಯೋಜನೆಗೊಂಡಿದ್ದವು ಎಂದು ತಿಳಿದುಬಂದಿದೆ.

ಬಾಬು ಸಿದ್ದಿ ಹಾಗೂ ತಂಡವು ವಿಶೇಷವಾಗಿ ತಯಾರಿಸಿದ ಬೃಹತ್ ಹೂವಿನ ಹಾರವನ್ನು ದೇಶಪಾಂಡೆ ಅವರಿಗೆ ಅರ್ಪಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಆತ್ಮೀಯತೆ ವ್ಯಕ್ತವಾಗಿದ್ದು, ಶುಭಾಶಯಗಳ ವಿನಿಮಯ ನಡೆಯಿತು.