ದೇಶಪಾಂಡೆ ಜನ್ಮದಿನ: ಬಾಬು ಸಿದ್ದಿ ತಂಡದಿಂದ ಶುಭಾಶಯ babu group
ಹಳಿಯಾಳ: ಹಳಿಯಾಳ ಕ್ಷೇತ್ರದ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಬಾಬು ಸಿದ್ದಿ ಮತ್ತು ತಂಡ ಭೇಟಿ ನೀಡಿ ಹೂಮಾಲೆ ಹಾಕಿ ಶುಭಾಶಯ ಕೋರಿದರು.
ಬಾಬು ಸಿದ್ದಿ ಹಾಗೂ ತಂಡವು ವಿಶೇಷವಾಗಿ ತಯಾರಿಸಿದ ಬೃಹತ್ ಹೂವಿನ ಹಾರವನ್ನು ದೇಶಪಾಂಡೆ ಅವರಿಗೆ ಅರ್ಪಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಆತ್ಮೀಯತೆ ವ್ಯಕ್ತವಾಗಿದ್ದು, ಶುಭಾಶಯಗಳ ವಿನಿಮಯ ನಡೆಯಿತು.
ಯಲ್ಲಾಪುರ ಭಾಗದ ಸಿದ್ದಿ ಸಮುದಾಯದ ಮುಖಂಡರಾದ ಬಾಬು ಸಿದ್ದಿ, ದೇಶಪಾಂಡೆ ಅವರ ಆಪ್ತರಾಗಿದ್ದು, ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸಭೆಗಳು ಆಯೋಜನೆಗೊಂಡಿದ್ದವು ಎಂದು ತಿಳಿದುಬಂದಿದೆ.
Related