ಹಳಿಯಾಳ ಸಬ್ ಜೈಲರ್ ಲೋಕಾಯುಕ್ತ ದಾಳಿ; ₹60 ಸಾವಿರ ಲಂಚ ಬೇಡಿಕೆ ಆರೋಪ
ಹಳಿಯಾಳ: ತಾಲೂಕು ಉಪ ಕಾರಾಗೃಹದ ಜೈಲರ್ ಕಲ್ಲಪ್ಪ ಗಸ್ತಿ ಅವರು ಕೊಲೆ ಆರೋಪಿಯಿಂದ ₹60 ಸಾವಿರ ಲಂಚ ಬೇಡಿಕೆ ಇಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ. ಯಡೋಗಾ ಗ್ರಾಮದ ರಾಜಕುಮಾರ ಹುಂದೇಕರ ಜೈಲಿನಲ್ಲಿ ಕೂಲಿ ಮಾಡಿ ಗಳಿಸಿದ ಸುಮಾರು ₹1.40 ಲಕ್ಷ ಹಣ ಬಿಡುಗಡೆ ಮಾಡಲು ಈ ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದಿದೆ.

ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಸಬ್ ಜೈಲ್ ಮೇಲೆ ದಾಳಿ ನಡೆಸಿ, ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಜೈಲರ್ ಮೊಬೈಲ್ ವಶಕ್ಕೆ ಪಡೆದು, ಧ್ವನಿ ಮಾದರಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಅಲ್ಲದೆ ದಾರವಾಡದ ಮಹಿಳಾ ನ್ಯಾಯವಾದಿಯೊಬ್ಬರಿಗೆ ₹10 ಸಾವಿರ ಪೋನ್ ಪೇ ಮೂಲಕ ವರ್ಗಾವಣೆ ಮಾಡಿಸಿರುವುದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ. ಇನ್ನಷ್ಟು ದಾಖಲೆ ಸಂಗ್ರಹಕ್ಕಾಗಿ ತನಿಖೆ ಮುಂದುವರಿದಿದ್ದು, ಜೈಲರ್ ಅವರನ್ನು ಸದ್ಯಕ್ಕೆ ವಶಕ್ಕೆ ಪಡೆದಿಲ್ಲ.
Related